
Ignatius Aranha (84)
July 24, 2023
ಆಮ್ಕಾಂ ವಿಶೇಸ್ ಸಕತ್ ಆಸಾ
August 1, 2023ಪರಿಸರ ಸಂರಕ್ಷಣೆ, ಜಾನುವಾರು ರಕ್ಷಣೆ ಕೃಷಿ ಜೊತೆಗೆ ಮಳೆನೀರು ಇಂಗಿಸುವಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಫಾ.ಫಾವೊಸ್ತಿನ್ ಲುಕಾಸ್ ಲೋಬೊ.

ಕಿನ್ನಿಗೋಳಿ ಇಗರ್ಜಿಯ ಸಂತ.ತೆರೆಜಾ ವಾಳೆಯ ಕುಟುಂಬಗಳಿಗೆ ಪರಿಸರ ಸಂರಕ್ಷಣೆ, ಜಾನುವಾರು ರಕ್ಷಣೆ, ಕೃಷಿ ಜೊತೆಗೆ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ಮನುಷ್ಯ ಈ ಭೂಮಿ ಮೇಲೆ ಜೀವಿಸುವಾಗ ಪಂಚ ಸೂತ್ರಗಳನ್ನು ನೆನಪಿಡಲಿ
1.ಜಲ್
2.ಜಮೀನ್
3.ಜಂಗಲ್
4.ಜಾನುವಾರು
5.ಜನ್
ಮನುಷ್ಯ ತನ್ನ ಜೀವನದ ಜೊತೆಗೆ ಜಲ್, ಜಮೀನ್, ಜಂಗಲ್, ಜಾನುವಾರು ರಕ್ಷಣೆ ಮಾಡಿದರೆ ಮನುಷ್ಯನ ಜೀವನ ಸುಲಭ ಹಾಗೂ ಅರೋಗ್ಯಪೂರ್ಣ ಜೀವನ ನಡೆಸಲು ಸಹಕಾರಿಯಾಗುತ್ತದೆ. ಎಂದು ಕಿನ್ನಿಗೋಳಿ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಫಾ. ಫಾವೊಸ್ತಿನ್ ಲುಕಾಸ್ ಲೋಬೊ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು,ಈ ಸಂದರ್ಭದಲ್ಲಿ ಸಂತ ತೆರೆಜಾ ವಾಡೊ ಗುರ್ಕಾರ್ ಗ್ರೆಟ್ಟಾ ಫೆರ್ನಾಂಡಿಸ್, ಪ್ರತಿನಿಧಿ ಎಡ್ನಾ ಡಿಸೋಜ ಹಾಗೂ ವಾಡೊ ಕುಟುಂಬ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು, ಸ್ಟ್ಯಾನಿ ಪಿಂಟೋ ಸ್ವಾಗತಿಸಿದರು, ಸೀಮಾ ಪಿಂಟೋ ವಂದಿಸಿದರು.